Description
ಸಂಡೇ ಟೈಮ್ಸ್ ನ ಟಾಪ್ ಟೆನ್ ಬೆಸ್ಟ್ ಸೆಲ್ಲರ್
ಒಬ್ಬ ಜೆನ್ ಸಂನ್ಯಾಸಿ ನೀಡಿರುವ ಅತ್ಯಂತ ಸರಳ ಭಾಷೆಯಲ್ಲಿನ ಮಾರ್ಗದರ್ಶನ ಇದು, ನಿಮ್ಮ ಮೂಡ್, ವೃತ್ತಿ ಮತ್ತು ಸಂಬಂಧಗಳಿಗೂ ಪ್ರೋತ್ಸಾಹ ನೀಡಲಿದೆ.
ಡೆಲಿ ಮೇಲ್
‘ಈ ಲೋಕವೇ ಇಷ್ಟು ವೇಗವಾಗಿ ಓಡುತ್ತಿದೆಯೇ ಅಥವಾ ನನ್ನ ಮನಸ್ಸೇ?
ಜೀವನದುದ್ದಕ್ಕೂ ಬದಲಾಗುತ್ತಿದ್ದ ಹಲವು ಪರಿವರ್ತನೆಗಳನ್ನು ಅಳವಡಿಸಿಕೊಂಡಿರುವ ಮತ್ತು ಕೊರಿಯಾದಲ್ಲಿ ಜನಿಸಿದ ಓರ್ವ ಜೆನ್ ಸಂನ್ಯಾಸಿ ಹೈಮಿನ್ ಸುನಿಮ್ ಅಧಿಕೃತವಾಗಿ ಬರೆದಿರುವ ಈ ಬೆಸ್ಟ್ ಸೆಲ್ಲರ್ ಪುಸ್ತಕವು ಜಾಗೃತಿ (ಮೈಂಡ್ಫುಲ್ನೆಸ್)ಯಲ್ಲಿ ಕೇಂದ್ರೀಕೃತವಾಗಿದೆ. ಇದರಲ್ಲಿ ಅವರು ವ್ಯವಹಾರಿಕ ಪ್ರತಿಫಲದಿಂದ ಹಿಡಿದು ಪ್ರೀತಿ ಮತ್ತು ಸಂಬಂಧಗಳಲ್ಲಿ ಎದುರಾಗುವ ಕಠಿಣ ಪರಿಸ್ಥಿತಿಯವರೆಗಿನ ಪ್ರತಿಯೊಂದು ವಿಷಯಕ್ಕೂ ಸಂಬಂಧಿಸಿದ ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದ್ದಾರೆ.
ಆಧುನಿಕ ಜೀವನದ ಭಾಗವಾಗಿರುವ ಚಿಂತೆಗಳ ಬಗ್ಗೆ ನೇರವಾಗಿ ಮಾತನಾಡುವ ಹೈಮಿನ್ ಸುನಿಮ್ ಅವರ ಸರಳ ಮತ್ತು ಹೃದಯಸ್ಪರ್ಶಿ ಉಪದೇಶಗಳು ಧರ್ಮ, ರಾಷ್ಟ್ರೀಯತೆ ಮತ್ತು ವಯಸ್ಸಿನಂತಹ ಚೌಕಟ್ಟುಗಳನ್ನು ಮೀರಿ ನಿಲ್ಲುತ್ತದೆ ಮತ್ತು ಭರವಸೆಯನ್ನು ತುಂಬುವ ಅವರ ಬರಹದ ಶೈಲಿ ನಮ್ಮೊಳಗೆ ಸ್ಥಿರತೆ ಮೂಡಿದಾಗ ಮಾತ್ರ ಅನುಭವಿಸಬಹುದಾದ ಆ ಶಕ್ತಿ ಮತ್ತು ಸಂತೋಷವನ್ನು ನೆನಪಿಸುತ್ತವೆ.
ಲೋಕವು ವೇಗವಾಗಿ ಓಡುತ್ತಿದೆ. ಅಂದರೆ ನಾವೂ ಅಷ್ಟೇ ವೇಗವಾಗಿ ಓಡಬೇಕು ಎಂದು ಇದರ ಅರ್ಥವಲ್ಲ.





Reviews
There are no reviews yet.