Description
ಗಹನ ಕಾರ್ಯ ರಹಸ್ಯ
‘ಡೀಪ್ ವರ್ಕ್(ಗಹನ ಕಾರ್ಯ) ಎಂದರೆ ‘ಬುದ್ಧಿಮತ್ತೆಗೆ ಸಂಬAಧಿಸಿದAತೆ ಹೆಚ್ಚಿನ ಕೌಶಲ ಬಯಸುವ ಕಾರ್ಯಭಾರವೊಂದರ ಮೇಲೆ ವಿಚಲಿತತೆಯಿಲ್ಲದೆ ಕೇಂದ್ರೀಕರಿಸುವ ಸಾಮರ್ಥ್ಯ. ಲೇಖಕನೇ ಸೃಷ್ಟಸಿದ ‘ಸ್ಟಡಿ ಹ್ಯಾಕ್ಸ್’ ಎಂಬ ತನ್ನ ಜನಪ್ರಿಯ ಬ್ಲಾಗ್ನಲ್ಲಿ, ಆತನು ‘ಡೀಪ್ ವರ್ಕ್’(ಗಹನ ಕಾರ್ಯ) ಎಂಬ ಮನೋಗತವನ್ನು ಅನಾವರಣಗೊಳಿಸಿದನು. ನೀವೇನು ಮಾಡುತ್ತೀರೋ ಅದರಲ್ಲಿ ಗಹನಕಾರ್ಯವು ನಿಮ್ಮನ್ನು ಉತ್ತಮಗೊಳಿಸುತ್ತದೆ, ಕಡಿಮೆ ಸಮಯದಲ್ಲಿ ಹೆಚ್ಚು ಸಾಧಿಸಲು ಅನುವು ಮಾಡಿಕೊಡುತ್ತದೆ ಹಾಗೂ ಕೌಶಲವೊಂದರ ಪರಿಣತಿಯಿಂದ ಬರುವ ನೈಜ ಸಾರ್ಥಕ್ಯ ಭಾವವನ್ನು ಒದಗಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದಲ್ಲಿ, ಹೆಚ್ಚುಹೆಚ್ಚು ಸ್ಪರ್ಧಾತ್ಮಕಗೊಳ್ಳುತ್ತಿರುವ ನಮ್ಮ ಆರ್ಥಿಕತೆಯಲ್ಲಿ ಗಹನಕಾರ್ಯವೆಂಬುದು ಒಂದು ಅದ್ಭುತ ಶಕ್ತಿ.
ಹಾಗಿದ್ದೂ, ಇನ್ನೂ ಹಲವು ಜನ, ಅದು ಗದ್ದಲಯುಕ್ತ ಮುಕ್ತ ಯೋಜನೆ ಕಛೇರಿಗಳಲ್ಲಿನ ಜ್ಞಾನಾಧಾರಿತ ಕೆಲಸಗಾರರೇ ಆಗಿರಲಿ, ಅಥವಾ ನಮ್ಮ ದೂರದೃಷ್ಟಿಯನ್ನು ಹರಿತಗೊಳಿಸಿಕೊಳ್ಳಲು ಹೆಣಗುತ್ತಿರುವ ಸೃಜನಶೀಲರೇ ಆಗಲಿ, ಇವರುಗಳು ಗಹನತೆಯ ಅಳಕ್ಕಿಳಿಯುವ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದಾರೆ-ಅದಕ್ಕೆ ಬದಲಾಗಿ, ಅದಕ್ಕಿಂತಲೂ ಉತ್ತಮ ಮಾರ್ಗವೊಂದಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳದೆ, ತಮ್ಮ ದಿನಗಳನ್ನು ಮಿಂಚAಚೆ ಮತ್ತು ಸಾಮಾಜಿಕ ಮಾಧ್ಯಮಗಳೆಂಬ ಉದ್ರೇಕಿತ ಮಬ್ಬಿನಲ್ಲಿ ವ್ಯಯಿಸುತ್ತಿದ್ದಾರೆ.
ಸಾಂಸ್ಕೃತಿಕ ವಿಮರ್ಶೆ ಮತ್ತು ವ್ಯವಹಾರಯೋಗ್ಯ ಸಲಹೆ ಈ ಎರಡರ ಮಿಶ್ರಣವಾಗಿ ‘ಡೀಪ್ ವರ್ಕ್(ಗಹನ ಕಾರ್ಯ)’ ಎಂಬೀ ಪುಸ್ತಕವು ವಿಚಲಿತಗೊಂಡ ಜಗತ್ತೊಂದರಲ್ಲಿ ಕೇಂದ್ರೀಕರಿಸಿದ ಯಶಸ್ಸನ್ನು ಹುಡುಕುತ್ತಿರುವವರಿಗೆ ಮಾರ್ಗದರ್ಶಕವಾಗುತ್ತದೆ.
* * *
ತೀವ್ರ ಗಮನಹರಿಸುವುದನ್ನು ಬೆಳೆಸಿಕೊಳ್ಳುವತ್ತ ಒತ್ತಾಯಪೂರ್ವಕವಾದೊಂದು ನಿದರ್ಶನವನ್ನು ಉಂಟು ಮಾಡುತ್ತದೆ, ಹಾಗೂ ತತ್ಕ್ಷಣವೇ ವ್ಯವಹಾರ ಯೋಗ್ಯವಾಗುವಂತಹ ಹೆಜ್ಜೆಗಳನ್ನು ನೀಡುತ್ತದೆ.
~‘ಒರಿಜಿನಲ್ಸ್’ ಎಂಬ ಕೃತಿಯ ಲೇಖಕನಾದ, ಆ್ಯಡಮ್ ಎಂ.ಗ್ರಾAಟ್ì’






Reviews
There are no reviews yet.