”
ದಿ ಪವರ್ ಆಫ್ ಹ್ಯಾಬಿಟ್ನ ಮೂಲಕ ನ್ಯೂಯಾರ್ಕ್ ಟೈಮ್ಸ್ನಿಂದ ಪುರಸ್ಕøತ ಬಿಸಿನೆಸ್ ರಿಪೋರ್ಟರ್ ಚಾಲ್ರ್ಸ್ ಡುಹಿಗ್ ಅಭ್ಯಾಸಗಳ ವೈಜ್ಞಾನಿಕ ಅಧ್ಯಯನದ ಮೂಲಕ ನಮ್ಮನ್ನು ಎಂತಹ ಪ್ರಪಂಚಕ್ಕೆ ಕೊಂಡೊಯ್ಯುತ್ತಾರೆ ಅಂದರೆ ನಾವು ರೋಮಾಂಚನಗೊಳ್ಳುವುದಷ್ಟೇ ಅಲ್ಲ ಆಶ್ಚರ್ಯಚಕಿತರಾಗುತ್ತೇವೆ.
ಕೆಲವು ಜನರು ಮತ್ತು ಕಂಪೆನಿಗಳು ವರ್ಷಗಳ ಪ್ರಯತ್ನದ ಬಳಿಕವೂ ಬದಲಾವಣೆಗೆ ಯಾಕಾಗಿ ಸಂಘರ್ಷಕ್ಕೆ ಒಳಗಾಗುತ್ತಾರೆ, ಅದೇ ವೇಳೆ ಅನ್ಯ ಜನರು ಸುಲಭವಾಗಿ ರಾತ್ರೋರಾತ್ರಿ ಬದಲಾವಣೆಯನ್ನು ತರುವುದರಲ್ಲಿ ಹೇಗೆ ಸಫಲರಾಗುತ್ತಾರೆ ಎನ್ನುವುದನ್ನು ಅವರು ಪತ್ತೆಹಚ್ಚಿದ್ದಾರೆ. ಅಭ್ಯಾಸಗಳು ಹೇಗೆ ಕೆಲಸ ಮಾಡುತ್ತವೆ, ಅದು ಮಿದುಳಿನ ಯಾವ ಭಾಗದಲ್ಲಿ ಜನ್ಮತಾಳುತ್ತವೆ ಎಂಬುದನ್ನು ಪತ್ತೆಹಚ್ಚಲು ಚಾಲ್ರ್ಸ್, ನ್ಯೂರೋಲಜಿಸ್ಟ್ಗಳ ಪ್ರಯೋಗಶಾಲೆಗಳಿಗೆ ಕೂಡಾ ಭೇಟಿ ನೀಡಿದ್ದಾರೆ. ಒಲಿಂಪಿಕ್ ಈಜುಗಾರ ಮೈಕಲ್ ಫೇಲ್ಪ್ಸ್, ಸ್ಟಾರ್ಬಕ್ಸ್ನ ಸಿಇಒ ಹಾವರ್ಡ್ ಶುಲ್ಸ್ ಮತ್ತು ನಾಗರಿಕ ಅಧಿಕಾರಗಳ ದೃಷ್ಟಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮೊದಲಾದ ಸಫಲ ವ್ಯಕ್ತಿಗಳ ಜೀವನದಲ್ಲಿ ಅಭ್ಯಾಸಗಳು ಹೇಗೆ ಪಾತ್ರವಹಿಸಿವೆ ಎಂಬುದನ್ನು ಚಾಲ್ರ್ಸ್ ನಮ್ಮ ಮುಂದೆ ಇರಿಸಿದ್ದಾರೆ.
ಇದರಿಂದ ಒಂದು ಸಮ್ಮೋಹಕ, ತಾರ್ಕಿಕ ಪರಿಣಾಮ ಎದುರಿಗೆ ಬರುತ್ತದೆ : ನಿಯಮಿತ ವ್ಯಾಯಾಮ ಮಾಡುವುದು, ತೂಕ ಇಳಿಸುವುದು, ತಮ್ಮ ಮಕ್ಕಳಿಗೆ ಸರ್ವಶ್ರೇಷ್ಠ ಪಾಲನೆಯನ್ನು ಒದಗಿಸುವುದು, ಮಹತ್ತರ ಉತ್ಪಾದನೆಯನ್ನು ಸಾಧಿಸುವುದು ಮತ್ತು ಎಲ್ಲಿಯವರೆಗೆ ಅಂದರೆ ಕ್ರಾಂತಿಕಾರೀ ಸಫಲತೆಯನ್ನು ಸಾಧಿಸುವ ನಿಟ್ಟಿನಲ್ಲಿ ಕಂಪೆನಿಗಳನ್ನು ಸ್ಥಾಪಿಸುವುದು ಮುಂತಾದ್ದರಲ್ಲಿ ಅಭ್ಯಾಸಗಳು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಇಲ್ಲಿ ವಿಶದೀಕರಿಸಲಾಗಿದೆ. ಈ ಹೊಸ ವಿಜ್ಞಾನವನ್ನು ಕರಗತ ಮಾಡಿಕೊಂಡು ನಾವು ನಮ್ಮ ವ್ಯಾಪಾರ, ನಮ್ಮ ಸಮುದಾಯ ಮತ್ತು ನಮ್ಮ ಬದುಕನ್ನು ರೂಪಾಂತರಿಸಲು ಸಾಧ್ಯವಿದೆ.
‘ಒಂದು ಚೊಕ್ಕ, ಉತ್ತೇಜಕ ಮತ್ತು ವಿಶೇಷ ಉಪಯುಕ್ತ ಪುಸ್ತಕ… ಇದರ ವೈಶಿಷ್ಟ್ಯವೆಂದರೆ ಸರಳತೆಯ ಸೊಗಸು.’ – ಜಿಮ್ ಕಾಲಿನ್ಸ್
‘ಈ ಪುಸ್ತಕ ಕೆಟ್ಟ ಅಭ್ಯಾಸಗಳ ವರ್ತುಲವನ್ನು ಕಿತ್ತೊಗೆಯುವುದರ ಬಗೆಗೆ ಬೌದ್ಧಿಕ ಗಂಭೀರತೆಯ ಜತೆಗೆ ವ್ಯಾವಹಾರಿಕ ಸಲಹೆಯನ್ನು ನೀಡುತ್ತದೆ.’ – ದಿ ಇಕನಾಮಿಸ್ಟ್
“
Reviews
There are no reviews yet.