Description
‘ಡೋಂಟ್ ಸ್ವೆಟ್ ದ ಸ್ಮಾಲ್ ಸ್ಟಫ್’ ಸರಣಿಯ ೨.೫ ಕೋಟಿ (25 million) ಪ್ರತಿಗಳು ಜಗತ್ತಿನಾದ್ಯಂತ ಮಾರಾಟವಾಗಿವೆ!
“ಇಪ್ಪತ್ತು ವರ್ಷಗಳ ಹಿಂದೆ ‘ಡೋಂಟ್ ಸ್ವೆಟ್ ದ ಸ್ಮಾಲ್ ಸ್ಟಫ್’ನಿಂದ ನಾವು ಕಲಿತದ್ದನ್ನು, ಸಕಾರಾತ್ಮಕ ಮನೋವಿಜ್ಞಾನದ ಹತ್ತು ವರ್ಷದ ಸಂಶೋಧನೆಯು ಈಗ ದೃಢಪಡಿಸಿದೆ.… ಈ ಅದ್ಭುತ ಪುಸ್ತಕ, ಸಂತೋಷದಿAದ ಬದುಕುವುದು ಹೇಗೆ ಎನ್ನುವುದನ್ನು ಸರಳವಾಗಿ ವಿವರಿಸುತ್ತದೆ.”
— ಶಾನ್ ಏಕೊರ್, ‘ದ ಹ್ಯಾಪಿನೆಸ್ ಅಡ್ವಾಂಟೇಜ್’ ಪುಸ್ತಕದ ಪ್ರಸಿದ್ಧ ಲೇಖಕ.
ಈ ಪುಸ್ತಕವು ಪ್ರೇರಣಾದಾಯಕ ಮತ್ತು ಗಮನಾರ್ಹ ಮಾರ್ಗದರ್ಶಿಯಾಗಿದೆ – ಸ್ವಯಂ ವಿಕಾಸ (Self Help) ಪುಸ್ತಕಗಳಲ್ಲಿನ ಒಂದು ಕ್ಲಾಸಿಕ್. ಇದು ನಿಮಗೆ ಸವಾಲುಗಳನ್ನು ಹೊಸ ದೃಷ್ಟಿಯಲ್ಲಿ ಹೇಗೆ ನೋಡಬೇಕು, ದಿನನಿತ್ಯದ ಚಿಕ್ಕ ಬದಲಾವಣೆಗಳಿಂದ ಒತ್ತಡ ಮತ್ತು ಕಷ್ಟಗಳನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು, ಮತ್ತು ನಿಮ್ಮ ಗುರಿಗಳನ್ನು ಸಾಧಿಸುವ ದಾರಿಯನ್ನು ಹೇಗೆ ಹುಡುಕಬೇಕು ಎಂಬುದನ್ನು ತೋರಿಸುತ್ತದೆ.
ಈ ಪುಸ್ತಕದಲ್ಲಿ ಹೇಳಿರುವ ಕೆಲವು ಮುಖ್ಯ ವಿಚಾರಗಳು:
ಸಮಸ್ಯೆಗಳನ್ನು ಶಿಕ್ಷಕರಂತೆ ನೋಡಿ
ಒಂದು ಸಮಯದಲ್ಲಿ ಒಂದೇ ಕೆಲಸ ಮಾಡಿ
ಯಶಸ್ಸನ್ನು ಇತರರೊಂದಿಗೆ ಹಂಚಿಕೊಳ್ಳಿ
ನಿಮ್ಮ ಅಂತರAಗದ ಧ್ವನಿಯನ್ನು ನಂಬಿ.
ರಿಚರ್ಡ್ ಕಾರ್ಲ್ಸನ್, Ph.D, ಜಾಗತಿಕವಾಗಿ ಪ್ರಸಿದ್ಧ ವಕ್ತಾರರಾಗಿದ್ದಾರೆ. ಅವರು ‘ಡೋಂಟ್ ಸ್ವೆಟ್ ದ ಸ್ಮಾಲ್ ಸ್ಟಫ್’ ಸರಣಿಯ ಹಲವು ಅತಿ ಹೆಚ್ಚು ಮಾರಾಟವಾದ ಪುಸ್ತಕಗಳನ್ನು ಬರೆದಿದ್ದಾರೆ. ಅವರ ಪ್ರಮುಖ ಪುಸ್ತಕಗಳು:
ಡೋಂಟ್ ಸ್ವೆಟ್ ದ ಸ್ಮಾಲ್ ಸ್ಟಫ್, ಡೋಂಟ್ ಸ್ವೆಟ್ ದ ಸ್ಮಾಲ್ ಸ್ಟಫ್ ವಿತ್ ಯೋರ್ ಫ್ಯಾಮಿಲಿ, ಡೋಂಟ್ ಸ್ವೆಟ್ ದ ಸ್ಮಾಲ್ ಸ್ಟಫ್ ಅಟ್ ವರ್ಕ್, ಡೋಂಟ್ ಸ್ವೆಟ್ ದ ಸ್ಮಾಲ್ ಸ್ಟಫ್ ಫಾರ್ ಟೀನ್ಸ್ ಮತ್ತು (ತಮ್ಮ ಪತ್ನಿ ಕ್ರಿಸ್ಟಿನ್ ಜೊತೆಗೆ) ಡೋಂಟ್ ಸ್ವೆಟ್ ದ ಸ್ಮಾಲ್ ಸ್ಟಫ್ ಇನ್ ಲವ್.
“ಸುಂದರವಾಗಿ ಬದುಕಲು ಏನು ಬೇಕು, ನಮ್ಮಲ್ಲಿ ಇರುವ ಸಾಮರ್ಥ್ಯವನ್ನು ಎತ್ತಿ ಹಿಡಿಯಲು ಏನು ಬೇಕು, ಎನ್ನುವುದನ್ನು ಈ ಪುಸ್ತಕ ಸರಳವಾಗಿ ನೆನಪಿಸುತ್ತದೆ.”
— ರಾಬಿನ್ ಶರ್ಮಾ, ‘ದ ಮಂಕ್ ಹೂ ಸೋಲ್ಡ್ ಹಿಸ್ ಫೆರಾರಿ’ ಪುಸ್ತಕದ ಪ್ರಸಿದ್ಧ ಲೇಖಕ.






Reviews
There are no reviews yet.