”
ಇಕಿಗಾಯ್ ನಮಗೆ ಏನನ್ನು ಕಲಿಸುತ್ತದೆ :
* ವಯಸ್ಸಾಗುತ್ತಿದ್ದರೂ ಯುವಕರಾಗಿ ಉಳಿಯುವ ಕಲೆಯನ್ನು.
* ವಯಸ್ಸಾಗದಿರುವುದರ ರಹಸ್ಯಗಳನ್ನು.
* ದೀರ್ಘ ಮತ್ತು ಸಂತಸಮಯ ಜೀವನ ವೃದ್ಧಿಸಿಕೊಳ್ಳುವ ಪುಟ್ಟ ಪುಟ್ಟ ವಿಷಯಗಳನ್ನು.
* ಲೋಗೋತೆರಪಿಯಿಂದಾಗುವ ಉತ್ತಮ ಜೀವನದ ಕೀಲಿ ಕೈಗಳನ್ನು.
* ನಾವು ಮಾಡುವ ಪ್ರತಿ ಕೆಲಸದಲ್ಲೂ ಹರಿವು(flow)ಕಾಣುವುದನ್ನು.
* ದೀರ್ಘ ಆರ್ಯುಷ್ಯ ನಡೆಸಿದ ಹಿರಿಯರು ನೀಡುವ ವಿವೇಕ ವಾಣಿಯನ್ನು.
* ಜಪಾನಿನ ಶತಾಯುಷಿಗಳು ನೀಡುವ ಹಿತೋಪದೇಶವನ್ನು.
* ದೀರ್ಘ ಕಾಲ ಬಾಳಿ ಬದುಕುವವರು ತಿನ್ನುವುದೇನು, ಕುಡಿಯುವುದೇನು ಎಂಬುದನ್ನು.
* ನಿತ್ಯದ ಬದುಕಿಗೆ ಸೌಮ್ಯ ಚಲನೆಗಳು ಮತ್ತು ವ್ಯಾಯಾಮಗಳನ್ನು.
* ವಯಸ್ಸಾದರೂ ಪುಟಿದೇಳುವುದು(resilience)
ಹೇಗೆ ಎಂಬುದನ್ನು.
ಜೊತೆಗೆ, ಪ್ರತಿ ಮುಂಜಾನೆ ಹಾಸಿಗೆಯಿಂದ ಪುಟಿದೇಳುವಂತೆ ಮಾಡುವ ‘ಇಕಿಗಾಯ್’ ಎಂಬುದೊಂದು ಪ್ರತಿಯೊಬ್ಬನಲ್ಲಿಯೂ ಇರುತ್ತದೆಂದು ಜಪಾನಿಗರು ನಂಬುವರು. ನಾವೂ-ನೀವೂ ಏಕೆ ನಂಬಬಾರದು!
ಸ್ಫೂರ್ತಿದಾಯಕ ಹಾಗೂ ಹಿತಕರವಾದ ಈ ಪುಸ್ತಕವು ನಮ್ಮ ವೈಯಕ್ತಿಕ ‘ಇಕಿಗಾಯ್’ನ್ನು ಅನಾವರಣಗೊಳಿಸುವ ಜೀವನ ಶೈಲಿ ಬದಲಾವಣೆಗೆ ಬೇಕಾದ ಸಾಧನಗಳನ್ನು(tools) ನಮಗೆ ನೀಡುತ್ತದೆ.
ನಾವೂ ಪ್ರಯತ್ನಿಸಿ ಜಯಶೀಲರಾಗೋಣ.
“
Reviews
There are no reviews yet.